Murugharajendra Maha Samsthanamata
Murughamata, Anandapuram
ಆನಂದಪುರಂ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠ ಮಲೆನಾಡಿನ ಸೃಷ್ಟಿಯ ಸೊಬಗಿನಲ್ಲಿ ಕೆಳದಿ ಸಂಸ್ಥಾನದ ರಾಜಗೌರವ ಭಕ್ತಿಗೆ ಪಾತ್ರವಾದ ಐತಿಹಾಸಿಕ ಹಿನ್ನೆಲೆಯ ಪ್ರಮುಖ ಧರ್ಮಪೀಠವಾಗಿದೆ. ಸುಮಾರು ಮೂರು ಶತಮಾನಗಳ ಶ್ರೀಮಂತ ಪರಂಪರೆಯ ಈ ಪೀಠಕ್ಕೆ ಪರಮ ತಪಸ್ವಿ ಕವಿ, ಸಾಹಿತಿ, ವಿದ್ವಾಂಸರು, ಮಿಗಿಲಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾಸ್ವಾಮಿಗಳವರನ್ನು ಪಡೆದ ಹೆಗ್ಗಳಿಕೆ ಇದೆ. ಜನ ಬದುಕಬೇಕೆಂಬ ಅನನ್ಯ ಕಳಕಳಿಯಿಂದ ಇತಿಹಾಸ ದುದ್ದಕ್ಕೂ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ.
ಧರ್ಮಪ್ರಚಾರ ಕೆಲಸ ಮಲೆನಾಡಿನಲ್ಲಿ ಇಂದು ಹೆಚ್ಚು ವೇಗವಾಗಿ ವ್ಯಾಪಕವಾಗಿ ನಡೆಯಬೇಕಿದೆ. ಈ ಹೊಣೆಯರಿತು ವ್ಯಸ್ಥಿತವಾಗಿ ಶ್ರೀ ಮಠ ತನ್ನ ಕಾರ್ಯಕ್ಷೇತ್ರ ರೂಪಿಸಿದೆ. ಧರ್ಮ ಜಾಗೃತಿಗೆ ಮಾಸಿಕ ಶಿವಾನುಭವ ಗೋಷ್ಠಿಗಳು, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಜಗದ್ಗುರು ಗುರುಬಸವೇಶ್ವರ ವಿದ್ಯಾಪೀಠ, ಇತಿಹಾಸ ಪರಂಪರೆ ಸಂರಕ್ಷಣೆಗೆ ಶಿವಪ್ಪನಾಯಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಪ್ರತಿಷ್ಠಾನ, ಪ್ರಕಟಣೆಗೆ ಗುರುಬಸವ ಅಧ್ಯಯನ ಪೀಠ, ಕ್ರೀಡಾ ಕ್ಷೇತ್ರದಲ್ಲಿ ಸಹ್ಯಾದ್ರಿ ಜೂಡೋ ಅಕಾಡೆಮಿ ಮುರುಘಾಮಠ ಯೋಜನಾ ಬದ್ದವಾಗಿ ಕೆಲಸ ಮಾಡುತ್ತಿವೆ.